ಬಿದರಹಳ್ಳಿ ನರಸಿಂಹಮೂರ್ತಿ( ಜನನ: ೦೫. ೦೨. ೧೯೫೦.) ಕವಿ,ಕತೆಗಾರ,ಕಾದಂಬರಿಕಾರ,ನಾಟಕಕಾರ,ವಿಮರ್ಶಕ,ಸಂಪಾದಕ,ಅನುವಾದಕ. == ಜನನ ಮತ್ತು ಬಾಲ್ಯ == ಇವರು ಹೊಳೆಹೊನ್ನೂರಿನಲ್ಲಿ ಜನಿಸಿದರು.ಮುಂದೆ ಹೊನ್ನಾಳಿಯಲ್ಲಿ ನೆಲೆಸಿದರು.ಮೈಸೂರು ವಿಶ್ವವಿದ್ಯಾನಿಲಯದಿಂದ ಎಮ್.ಎ.ಪದವಿ ಪಡೆದ ಬಳಿಕ ಪಿ.ಜಿ.ಡಿ.ಇ.ಎಸ್.ಪದವಿಯನ್ನು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲ್ಯಾಂಗ್ವೇಜಸ್,ಹೈದ್ರಾಬಾದ್ ಇಲ್ಲಿಂದ ಪಡೆದರು.ಅಧ್ಯಾಪಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಪ್ರಾಂಶುಪಾಲರಾಗಿ ನಿವೃತ್ತರಾದರು.ಇವರು ಲೇಖಕರಾಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಹಲವು ಈ ಕೆಳಗಿನಂತಿವೆ. == ಪ್ರಕಟಿತ ಕೃತಿಗಳು == ಕವಿತಾ ಸಂಕಲನಗಳು ಕಾಡಿನೊಳಗಿದೆ ಜೀವ (೧೯೭೯) ಸೂರ್ಯದಂಡೆ (೧೯೯೬) ಅಕ್ಕಿಕಾಳು ನಕ್ಕಿತಮ್ಮಾ (೨೦೦೧) ಭಾವಕ್ಷೀರ (೨೦೦೬) ಕಥಾಸಂಕಲನಗಳು: ಶಿಶು ಕಂಡ ಕನಸು (೧೯೯೩) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ) ಹಂಸೆ ಹಾರಿತ್ತು (೨೦೦೦) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ) ಕಾದಂಬರಿ: ಹೊಳೆಮಕ್ಕಳು (೨೦೧೧) ನಾಟಕ: ಮಹಾಗಾರುಡಿ (೨೦೦೯) ವಿಮರ್ಶೆ: ಕಡಲಂತೆ ಕಾರಂತ (೧೯೯೭) ಅರಿವಲಗು (೨೦೦೨) ಶಿವಶಕ್ತಿ ಸಂಪುಟ (೨೦೧೧) ವಿಸ್ತರಿಸುವ ವರ್ತುಲ (೨೦೧೧) ಸಂಪಾದನೆ: ಹೊನ್ನೇರು (೧೯೯೫)(ಹೊನ್ನಾಳಿ ತಾಲೂಕಿನ ಪ್ರಾತಿನಿಧಿಕ ಕವನ ಸಂಕಲನ) ಬಾಲಲೀಲಾ ಮಹಾಂತ (೧೯೯೬)(ತತ್ವಪದಗಳು) ಜಾಂಬವತಿ ಕಲ್ಯಾಣ (೧೯೯೭)(ಯಕ್ಷಗಾನ) ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವಿಸ್ ವಾಚಿಕೆ (೧೯೯೭)(ನೊಬೆಲ್ ವಿಜೇತ ಸಾಹಿತಿ ಮಾಲಿಕೆ) ಅನುಭವಾಮೃತ (೨೦೦೪)(ಮಹಲಿಂಗರಂಗನ ಭಾಮಿನಿ ಷಟ್ಪದಿ ಕಾವ್ಯ) ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ-ಕನ್ನಡ ನಿಘಂಟು (೨೦೧೧)(ಜಂಟಿ ಸಂಪಾದನೆ) ಅನುವಾದ: ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ (೨೦೧೧) ಜೀವನಚರಿತ್ರೆ: ಶಿಶುನಾಳ ಶರೀಫ (೧೯೯೪)(ನವಸಾಕ್ಷರ ಮಾಲಿಕೆ) == ಪಡೆದಿರುವ ಪ್ರಶಸ್ತಿಗಳು == ಮಹಲಿಂಗರಂಗ ಪ್ರಶಸ್ತಿ ಶಿವಾನಂದ ಪಾಟೀಲ ಪ್ರಶಸ್ತಿ